ಕಾಮಿಡಿ ಟೈಂನಲ್ಲಿ ?ಸ್ನೇಹಿತರು
Posted date: 02 Thu, Feb 2012 ? 09:42:04 AM

ರೇಖಾಜಗದೀಶ್ ಅರ್ಪಿಸುವ, ಸೌಂದರ್ಯ ಜಗದೀಶ್ ಫ಼ಿಲಂಸ್ ಲಾಂಛನದಲ್ಲಿ ಸೌಂದರ್ಯ ಜಗದೀಶ್ ನಿರ್ಮಿಸುತ್ತಿರುವ ‘ಸ್ನೇಹಿತರು ಚಿತ್ರಕ್ಕಾಗಿ ನೆಲಮಂಗಲದ ಖಾಸಗಿ ನಿವಾಸವೊಂದರಲ್ಲಿ ಕೆಲವು ಹಾಸ್ಯ ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಲಾಯಿತು.  ಸೃಜನ್‌ಲೋಕೇಶ್, ಮಾ:ಸ್ನೇಹಿತ್, ರವಿಶಂಕರ್, ಪ್ರಣೀತಾ ಮುಂತಾದವರು ಈ ಭಾಗದ ಸನ್ನಿವೇಶದಲ್ಲಿ ಭಾಗವಹಿಸಿದ್ದರು. ಚಿತ್ರಕ್ಕೆ ಹಾಡುಗಳ ಚಿತ್ರೀಕರಣ ಹಾಗೂ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ.
     ರಾಮ್‌ನಾರಾಯಣ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ಎಂ.ಆರ್.ಸೀನು ಛಾಯಾಗ್ರಹಣ, ಗಣೇಶ್.ಎಂ ಸಂಕಲನ, ತ್ರಿಭುವನ್, ಹರ್ಷ ನೃತ್ಯ ನಿರ್ದೇಶನ, ಪಳನಿರಾಜ್, ರವಿವರ್ಮ ಸಾಹಸ ನಿರ್ದೇಶನ ಹಾಗೂ ನಂಜುಂಡಸ್ವಾಮಿ ಅವರ ಕಲಾ ನಿರ್ದೇಶನ ‘ಸ್ನೇಹಿತರು ಚಿತ್ರಕ್ಕಿದೆ.
    ವಿಜಯರಾಘವೇಂದ್ರ, ತರುಣ್‌ಚಂದ್ರ, ರವಿಶಂಕರ್, ಸೃಜನ್‌ಲೋಕೇಶ್, ಪ್ರಣೀತಾ, ಮಾ||ಸ್ನೇಹಿತ್, ಶರಣ್, ರಮೇಶ್‌ಭಟ್, ಗಿರಿಜಾಲೋಕೇಶ್, ಶೋಭ್‌ರಾಜ್, ಬುಲೆಟ್‌ಪ್ರಕಾಶ್, ಸಿಹಿಕಹಿಚಂದ್ರು, ಸಾಧುಕೋಕಿಲಾ, ವಿ.ಮನೋಹರ್, ಮೋಹನ್‌ಜುನೇಜಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed